ಅಸಾನಿ ಸೈಕ್ಲೋನ್ ಪರಿಣಾಮ ಬೆಂಗಳೂರಿನ ಹಲವೆಡೆ ಇಂದು ಭಾರೀ ಮಳೆ | Cyclone Asani Effect | Bengaluru | Rain

2022-05-10 6

ಅಸಾನಿ ಸೈಕ್ಲೋನ್ ಪರಿಣಾಮ ಬೆಂಗಳೂರಿನ ಹಲವೆಡೆ ಇಂದು ಭಾರೀ ಮಳೆಯಾಗಿದೆ. ಇನ್ನೂ ಮುಂದಿನ ಮೂರು ದಿನಗಳ ಕಾಲ ರಾಜ್ಯದಾದ್ಯಂತ ಗುಡುಗು ಮಿಂಚು ಸಹಿತ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೋಲಾರ ಜಿಲ್ಲೆಯಾದ್ಯಂತ ರಣ ಭೀಕರ ಬಿರುಗಾಳಿ ಸಹಿತ ಮಳೆ ಆಗಿದೆ. ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರು, ರೋಣೂರು, ಸೇರಿದಂತೆ ಹಲವಡೆ ಮಾವಿನ ಬೆಳೆ ಸಂಪೂರ್ಣ ಮಣ್ಣುಪಾಲಾಗಿದೆ. ಲಕ್ಷಾಂತರ ರೂಪಾಯಿ ನಷ್ಟದಿಂದ ಮಾವು ಬೆಳೆಗಾರರು ಕಂಗಲಾಗಿದ್ದಾರೆ. ಇನ್ನು ಚಿತ್ರದುರ್ಗ ಜಿಲ್ಲೆ ಹಿರಿಯೂರಿನಲ್ಲಿ ಮಳೆ,ಗಾಳಿಗೆ ಅಪಾರ ಪ್ರಮಾಣದ ಅಡಿಕೆ, ತೆಂಗು,ಬಾಳೆ ಬೆಳೆ ಹಾನಿಯಾಗಿದೆ. ಬೆಳೆಹಾನಿಯಾದ ಹೊಸಕರೆ, ಅರಳಿಕೆರೆ, ಧರ್ಮಪುರ, ಹಲಗಲದ್ದಿ ಗ್ರಾಮಗಳಲ್ಲಿ ಶಾಸಕಿ ಪೂರ್ಣಿಮಾ ಬೆಳೆ ವೀಕ್ಷಣೆ ನಡೆಸಿದ್ರು. ಈ ವೇಳೆ ಶಾಸಕಿ ಮುಂದೆ ರೈತ ಮಹಿಳೆ ಕಣ್ಣೀರು ಹಾಕಿದ್ರು. ಇನ್ನು ಕೆಆರ್ ಪೇಟೆ ತಾಲೂಕಿನ ಹಂಚನಳ್ಳಿಯ ರೈತ ಮಹಿಳೆಯೊಬ್ಬರು ಹಗಲು ಇರುಳೆನ್ನದೇ ಕಷ್ಟಪಟ್ಟು ಬೆಳಸಿದ್ದ ಇಡೀ ತೆಂಗು ಮತ್ತು ಅಡಿಕೆ ತೋಟ ಬಿರುಗಾಳಿ ಮಳೆಗೆ ಸಂಪೂರ್ಣ ನಾಶವಾಗಿದೆ. ಇನ್ನೇ ಫಸಲು ಕೊಡುವಷ್ಟರ ಮಟ್ಟಿಗೆ ಬೆಳೆದಿದ್ದ 90ಕ್ಕೂ ಹೆಚ್ಚು ತೆಂಗಿನ ಮರಗಳು ಧರೆಗುರುಳಿವೆ. ಈ ದೃಶ್ಯವನ್ನು ಕಂಡ ರೈತ ಮಹಿಳೆ ವೀರಾಜಮ್ಮನ ಆಕ್ರಂದನ ಮುಗಿಲು ಮುಟ್ಟಿತ್ತು.

#PublicTV #AsaniCyclone #Rain